ಬೀದರ್: ವಿಜಯದಶಮಿ ನಿಮಿತ್ತ ಶ್ರೀ ರಾಮಲೀಲಾ ಉತ್ಸವ ಸಮಿತಿಯಿಂದ ನಗರದ ಸಾಯಿ ಶಾಲೆ ಆವರಣದಲ್ಲಿ ಬುಧವಾರ ಮತ್ತು ಗುರುವಾರ ವಿವಿಧ ಕಾರ್ಯಕ್ರಮ ನಡೆದವು. ಬುಧವಾರ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ದೇಶಭಕ್ತಿ ಗೀತೆಗಳು ಜನಮನ ಸೆಳೆದವು.

ಗುರುವಾರ ರಾತ್ರಿ ರಾಮಲೀಲಾ ಪ್ರದರ್ಶನ ನಂತರ, ಅಸತ್ಯದ ಮೇಲೆ ಸತ್ಯದ ಜಯ ಮತ್ತು ದುಷ್ಟ ಶಕ್ತಿಗಳ ಸಂಹಾರದ ಪ್ರತೀಕವಾಗಿ 42 ಅಡಿ ಎತ್ತರದ ರಾವಣನ ಪ್ರತಿರೂಪವನ್ನು ದಹಿಸಲಾಯಿತು. ದಹನ ಕಾರ್ಯಕ್ರಮ ನೋಡಲು ಸಹಸ್ರಾರು ಮಂದಿ ಸೇರಿದ್ದರು. ಪಟಾಕಿಗಳಿಂದ ರಾವಣನ ಪ್ರತಿಕೃತಿ ದಹನ ಮಾಡುತ್ತ ಜನ ಜೈಕಾರ ಘೋಷಣೆ ಕೂಗಿ ಹರ್ಷ ವ್ಯಕ್ತಪಡಿಸಿದರು. ಹಲವರು ವಿಡಿಯೋ ಹಾಗೂ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಪಟ್ಟರು. ರಾಮಲೀಲಾ ಉತ್ಸವ ಸಮಿತಿಯು ಕಳೆದ 19 ವರ್ಷಗಳಿಂದ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವುದು ಗಮನಾರ್ಹ.

ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಬಿಡಿಎ ಮಾಜಿ ಅಧ್ಯಕ್ಷ ಬಾಬು ವಾಲಿ, ಮುಖಂಡ ಗುರುನಾಥ ಕೊಳ್ಳುರ್, ಎಸ್ಪಿ ಪ್ರದೀಪ್ ಗುಂಟಿ, ಹೆಚ್ಚುವರಿ ಎಸ್ಪಿ ಚಂದ್ರಕಾಂತ ಪೂಜಾರಿ, ಶಂಕರರಾವ್ ಕೊಟರಗಿ, ವಿರೂಪಾಕ್ಷ ಗಾದಗಿ, ಅಶೋಕ ರೇಜಂತಲ್, ಸಮಿತಿ ಸಂಸ್ಥಾಪಕ ಈಶ್ವರಸಿಂಗ್ ಠಾಕೂರ್, ಅಧ್ಯಕ್ಷ ಚಂದ್ರಶೇಖರ ಗಾದಾ, ಪ್ರಧಾನ ಕಾರ್ಯದರ್ಶಿ ಮಹೇಶ್ವರ ಸ್ವಾಮಿ ಇತರರಿದ್ದರು.

ಇದನ್ನೂ ಓದಿ: ತುಮಕೂರು ದಸರಾ ಮಹೋತ್ಸವ: ವೈಭವಯುತ ಅಂಬಾರಿ ಮೆರವಣಿಗೆಗೆ ಚಾಲನೆ ನೀಡಿದ ಸಚಿವ ಡಾ. ಜಿ. ಪರಮೇಶ್ವರ್