ಮೈಸೂರು: ಹುಲ್ಲಿನ ಮೆದೆಯಲ್ಲಿ ಅಡಗಿದ್ದ ಬೃಹತ್ ಹೆಬ್ಬಾವನ್ನು ಮೈಸೂರು ತಾಲೂಕಿನ ಮೈದನಹಳ್ಳಿಯಲ್ಲಿ ಸೋಮವಾರ ರಾತ್ರಿ ರಕ್ಷಿಸಲಾಯಿತು.

ರೈತ ಪ್ರಸನ್ನ ಅವರು ತಮ್ಮ ಜಾನುವಾರುಗಳಿಗೆ ಹುಲ್ಲು ತರಲು ಹೋಗಿದ್ದಾಗ ಮೆದೆಯಲ್ಲಿದ್ದ ಹೆಬ್ಬಾವನ್ನು ಕಂಡು ತಕ್ಷಣ ಉರಗ ರಕ್ಷಕ ಸ್ನೇಕ್ ಶ್ಯಾಮ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಸ್ನೇಕ್ ಶ್ಯಾಮ್ ಹುಲ್ಲಿನ ಮೆದೆಯೊಳಗೆ ಅಡಗಿದ್ದ ಹೆಬ್ಬಾವನ್ನು ಜಾಗರೂಕತೆಯಿಂದ ಎಳೆದು ರಕ್ಷಣೆ ಮಾಡಿದರು.

ಸುಮಾರು 10 ಅಡಿ ಉದ್ದ, 15 ಕೆ.ಜಿ ತೂಕ ಇರುವ ಹೆಬ್ಬಾವನ್ನು ನೋಡಿದ ಗ್ರಾಮಸ್ಥರು ಬೆಚ್ಚಿದರು. ಸೆರೆ ಹಿಡಿದ ಹೆಬ್ಬಾವನ್ನು ಸ್ನೇಕ್ ಶ್ಯಾಮ್ ಅವರು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ಎರಡು ಹೆಬ್ಬಾವು ರಕ್ಷಣೆ: ಇತ್ತೀಚೆಗೆ, ಹಾವೇರಿಯಲ್ಲಿ ಉರಗ ರಕ್ಷಕ ರಮೇಶ್ ಹಾನಗಲ್ ಅವರು ಎರಡು ಹೆಬ್ಬಾವುಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದರು. ಕ್ಯಾಸನೂರು ಗ್ರಾಮದ ಎಸ್.ಜಿ.ಪಾಟೀಲ ಎಂಬವರ ಅಡಿಕೆ ಹಾಗೂ ಬಾಳೆ ತೋಟಗಳಲ್ಲಿ ಹೆಬ್ಬಾವುಗಳು ಕಾಣಿಸಿಕೊಂಡಿದ್ದವು. ನಾಗರಹಾವು, ಕೊಳಕುಮಂಡಲ, ನೀರುಹಾವು ಹೀಗೆ ಬೇರೆ ಬೇರೆ ಹಾವುಗಳನ್ನು ಹಿಡಿದಿದ್ದ ರಮೇಶ್, ಮೊದಲ ಬಾರಿಗೆ ಎರಡು ಹೆಬ್ಬಾವುಗಳನ್ನು ರಕ್ಷಣೆ ಮಾಡಿದ್ದರು. ಒಂದು ಹಾವು 15 ಅಡಿ ಹಾಗೂ ಇನ್ನೊಂದು ಹಾವು 10 ಅಡಿ ಉದ್ದವಿತ್ತು.

ಇದನ್ನೂ ನೋಡಿ: ಟ್ರಕ್ ಚಾಲಕನೊಂದಿಗೆ 300 ಕಿ.ಮೀ ಪ್ರಯಾಣಿಸಿದ 7 ಅಡಿ ಉದ್ದದ ಬ್ಲ್ಯಾಕ್ ಕೋಬ್ರಾ: ವಿಡಿಯೋ