Surprise Me!

ಕನ್ನಡ ಮಾಧ್ಯಮ ಶಾಲೆಗಳಲ್ಲಿ ದಾಖಲಾತಿ ಕುಸಿತ: ಸುಧಾ ಮೂರ್ತಿ ಬೇಸರ

2025-10-27 14 Dailymotion

ಹುಬ್ಬಳ್ಳಿ: ಕನ್ನಡ ಮಾಧ್ಯಮ ಶಾಲೆಗಳಿಗೆ ಬರುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಮಕ್ಕಳನ್ನು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ರಾಜ್ಯಸಭೆ ಸದಸ್ಯೆ ಸುಧಾ ಮೂರ್ತಿ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಕನ್ನಡ ಶಾಲೆಗಳಲ್ಲಿ 1,400 ಮಕ್ಕಳ ಸಂಖ್ಯೆ ಇತ್ತು. ಆದರೆ ಈಗ 14 ಮಕ್ಕಳನ್ನು ಹುಡುಕುವಂತ ಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸರ್ಕಾರಿ ಶಿಕ್ಷಣದ ಬಗ್ಗೆ ಜನರಲ್ಲಿ ಜಾಗೃತಿ ಕಡಿಮೆಯಾಗುತ್ತಿದೆ. ಜನರು ಖಾಸಗಿ ಶಿಕ್ಷಣದತ್ತ ಒಲವು ತೋರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ದಾಖಲಾತಿ ಹೆಚ್ಚು ಮಾಡಲು ಸರ್ಕಸ್ ಮಾಡುವಂತಾಗಿದೆ ಎಂದು ಹೇಳಿದರು.

ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಮಾತನಾಡಿ, ನಮ್ಮ ಮಕ್ಕಳಿಗೆ ಜಗತ್ತಿನ ಜ್ಞಾನ ಕೊಡಬೇಕು. ಸರ್ಕಾರ ಬದಲಾವಣೆಗೊಂಡಾಗ ಶಿಕ್ಷಣದ ಧ್ಯೇಯೋದ್ದೇಶಗಳು ಬದಲಾವಣೆಯಾಗುತ್ತಿವೆ. ಒಂದು ಶಾಲೆಗೆ ಉತ್ತಮ ವಾತಾವರಣ ಇರಬೇಕು. ಎನ್​ಇಪಿಯನ್ನು ಎಲ್ಲಾ ರಾಜ್ಯಗಳು ಅನುಷ್ಠಾನ ಮಾಡಬೇಕು. ವಿದ್ಯಾರ್ಥಿಗಳಿಗೆ ಮಾರ್ಕ್ಸ್ ಮುಖ್ಯವಲ್ಲ. ಮಕ್ಕಳು ಶಿಕ್ಷಕರನ್ನು ಇಷ್ಟಪಟ್ಟರೇ ಶಿಕ್ಷಣವನ್ನೂ ಇಷ್ಟಪಡುತ್ತಾರೆ ಎಂದರು.

ಶಿಕ್ಷಣದಲ್ಲಿ ಹತ್ತು ವರ್ಷಗಳ ಹಿಂದಿನ ಪರಿಸ್ಥಿತಿ ಈಗ ಇಲ್ಲ. ಇವತ್ತಿನ ಪದ್ಧತಿಯ ಮೇಲೆ ಮಕ್ಕಳಿಗೆ ಶಿಕ್ಷಣ ನೀಡಬೇಕು. ಶಿಕ್ಷಣದಲ್ಲಿ ಮನೋಧರ್ಮ ಆಗಬೇಕು. ಅನ್ನ ಮತ್ತು ಜ್ಞಾನ ಎಂದೂ ಸಹ ಮಾರಾಟ ಆಗಬಾರದು. ಇವತ್ತು ಜ್ಞಾನ ಮಾರಾಟ ಆಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ವಿಮಾನದಲ್ಲಿ ದೆಹಲಿ ಪ್ರವಾಸ: SSLC ಟಾಪರ್ಸ್​ಗೆ ದಾವಣಗೆರೆ ಸಂಸದರಿಂದ ಗಿಫ್ಟ್

Buy Now on CodeCanyon