<p>ಅವನು ಊರಿನ ಚಿಕ್ಕೆಜಮಾನ... ಕಡುಬಡವನ್ನಾದ್ರೂ ಅವನ ಒಳ್ಳೆತನಕ್ಕೆ ಊರಿನ ಜನ ಅವನನ್ನ ಯಜಮಾನನಾಗಿ ಆಯ್ಕೆ ಮಾಡಿದ್ರು.. ಇನ್ನೂ ಮನೆಯ ವಿಷಯಕ್ಕೆ ಬರೋದಾದ್ರೆ 13 ವರ್ಷದ ದಾಂಪತ್ಯ ಜೀವನ ಅವರದ್ದು.. ಇಬ್ಬರು ಗಂಡು ಮಕ್ಕಳು.. ಕೂಲಿ ಮಾಡಿದ್ರೂ ಹೆಂಡತಿ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ತಿದ್ದ.. ಆದ್ರೆ ಆವತ್ತೊಂದು ದಿನ ಆತ ಇದ್ದಕ್ಕಿದ್ದಂತೆ ತನ್ನದೇ ಮನೆಯಲ್ಲಿ ಮೃತಪಟ್ಟಿದ್ದ.. </p>
