ಹಾವೇರಿ: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ಸಂಘಟನೆ ನೂರು ವರ್ಷ ಪೂರೈಸಿದ ಅಂಗವಾಗಿ ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ಪಥಸಂಚಲನ ಏರ್ಪಡಿಸಲಾಗಿತ್ತು. ಪಟ್ಟಣದ ಕುಮಾರೇಶ್ವರ ಮಠದಿಂದ ಆರಂಭವಾದ ಪಥಸಂಚಲನದಲ್ಲಿ ಸಾವಿರಕ್ಕೂ ಅಧಿಕ ಗಣವೇಷಧಾರಿಗಳು ಪಾಲ್ಗೊಂಡಿದ್ದರು. ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸಿದ ಪಥಸಂಚಲನದ ಗಣವೇಷಧಾರಿಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜನರು ಸ್ವಾಗತ ಕೋರಿದರು.

ಪಥಸಂಚಲನ ಕುಮಾರೇಶ್ವರ ಮಠ, ಶಿವಾಜಿ ನಗರ, ಎಸ್.ಬಿ.ನಗರ ಸೇರಿದಂತೆ ಹಲವು ಕಡೆಗಳಲ್ಲಿ ಸಂಚರಿಸಿತು. ಸುಮಾರು 4 ಕಿಲೋಮೀಟರ್ ದೂರದವರೆಗೂ ಪಥಸಂಚಲನ ನಡೆಸಲಾಯಿತು.

ಸಾರ್ವಜನಿಕರು ಪಥಸಂಚಲನ ಬರುವ ದಾರಿಗೆ ನೀರು ಹಾಕಿ ಶುಚಿಗೊಳಿಸಿದ್ದರು. ದಾರಿಯಲ್ಲಿ ರಂಗೋಲಿ ಹಾಕಿ ಸ್ವಾಗತಿಸಲಾಯಿತು. ಪಥಸಂಚಲನದ ಮಾರ್ಗದುದ್ದಕ್ಕೂ ತಳಿರು ತೋರಣ ಕಟ್ಟಲಾಗಿತ್ತು. ಮುಂಜಾಗೃತಾ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ಸರ್ಕಾರಕ್ಕೆ ಆರ್‌ಎಸ್‌ಎಸ್ ಪ್ರಸ್ತಾವನೆ: ಕಲಬುರಗಿ ಜಿಲ್ಲೆಯ ಚಿತ್ತಾಪುರ ನಗರದಲ್ಲಿ ನವೆಂಬರ್ 13 ಅಥವಾ 16ರಂದು ಪಥ ಸಂಚಲನಕ್ಕೆ ಅನುಮತಿ ನೀಡುವಂತೆ ಆರ್‌ಎಸ್‌ಎಸ್ ಪ್ರಮುಖರು ಸರ್ಕಾರಕ್ಕೆ ನವೆಂಬರ್ 6,2025ರಂದು ಪ್ರಸ್ತಾವನೆ ಸಲ್ಲಿಸಿದ್ದರು. ಅನುಮತಿ ನೀಡುವ ವಿಚಾರದ ಬಗ್ಗೆ ಹೈಕೋರ್ಟ್ ಸಲಹೆಯಂತೆ ಅಡ್ವೊಕೇಟ್ ಜನರಲ್ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಆರ್‌ಎಸ್‌ಎಸ್ ಸಂಘಟನೆಯ ಪರ ವಕೀಲರು ಈ ಪ್ರಸ್ತಾವ ಮಂಡಿಸಿದ್ದರು.

ಇದನ್ನೂ ಓದಿ: ಚಿತ್ತಾಪುರದ ಗಣವೇಷಧಾರಿಗಳು ಮಾತ್ರ ಪಥ ಸಂಚಲನದಲ್ಲಿ ಭಾಗವಹಿಸಲಿದ್ದಾರೆ: ಸರ್ಕಾರಕ್ಕೆ ಆರ್‌ಎಸ್‌ಎಸ್ ಪ್ರಸ್ತಾವನೆ