Surprise Me!

ಆನೇಕಲ್: ಕಾಡು ಕೋಣದ ಆಟಾಟೋಪ, ಜನರಲ್ಲಿ ಆತಂಕ

2025-11-28 28 Dailymotion

ಆನೇಕಲ್: ಕಳೆದ ಎರಡು ಮೂರು ದಿನಗಳಿಂದ ಕಾಡು ಕೋಣವೊಂದು ಆಟಾಟೋಪ ಪ್ರದರ್ಶಿಸುತ್ತಿದ್ದು, ಅರಣ್ಯಾಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊದಲ‌ ದಿನ‌ ಸೊಪ್ಪಹಳ್ಳಿ ಕಡೆಯಲ್ಲಿ ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದವರಿಗೆ ಮರಗಳ ನಡುವೆ ಕಾಡು ಕೋಣ ಕಾಣಿಸಿಕೊಂಡಿತ್ತು. ಇದರ ದೃಶ್ಯವನ್ನು ತಮ್ಮ ಮೊಬೈಲ್​ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದರು. ನಿನ್ನೆ ಖಾಸಗಿ ಬಡಾವಣೆಯ ಗೋಡೆ ಕೆಡವಿ ನಿಲ್ಲಿಸಿದ್ದ ಬೈಕನ್ನು ಕಾಡುಕೋಣ ಕೊಂಬಿನಿಂದ ತಿವಿದ ದೃಶ್ಯವೂ ವೈರಲ್ ಆಗಿದೆ. ರಾತ್ರಿ ದೊಡ್ಡ ಹಾಗಡೆ ಗ್ರಾಮದಲ್ಲಿ ನಿಂತಿರುವ ದೃಶ್ಯ ಸಾರ್ವಜನಿಕರ ಮೊಬೈಲ್​​ನಲ್ಲಿ ಸೆರೆಯಾಗಿದ್ದು, ಸುತ್ತಮುತ್ತಲ ಗ್ರಾಮಸ್ಥರ ಆತಂಕಕ್ಕೆ‌ ಕಾರಣವಾಗಿದೆ.

ಆನೇಕಲ್​​ನತ್ತ ಆನೆಗಳು ಬರುವುದು ಸಹಜ. ಆಗಾಗ ಚಿರತೆ, ಕರಡಿ ಮತ್ತಿತರ ಪ್ರಾಣಿಗಳು ಗ್ರಾಮಗಳತ್ತ ಬರುವುದು ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಆಗೆಲ್ಲ ಸಮರೋಪಾದಿಯಲ್ಲಿ ಅರಣ್ಯ ಇಲಾಖೆ ಎಚ್ಚೆತ್ತು ಕಾಡಿನತ್ತ ಅವುಗಳನ್ನು ಓಡಿಸುವಲ್ಲಿ ಯಶಸ್ವಿಯಾಗುತ್ತಿತ್ತು. ಆದರೆ, ಇದೀಗ ಮೂರು ದಿನಗಳಿಂದ ಸತತವಾಗಿ ಗ್ರಾಮಗಳಲ್ಲಿ‌ ಕಾಡು ಕೋಣ ಕಾಣಸಿಕ್ಕರೂ ಅರಣ್ಯಾಧಿಕಾರಿಗಳು ಹಾಗೂ ವನ್ಯಜೀವಿ ಸಂರಕ್ಷಣಾ ಇಲಾಖೆ ದಿವ್ಯ ಮೌನಕ್ಕೆ ಜಾರಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ಇದನ್ನೂ ಓದಿ: ಗಂಗಾವತಿ - ಜನವಸತಿ ಪ್ರದೇಶಕ್ಕೆ ನುಗ್ಗಿದ ಮೊಸಳೆ: ಮಧ್ಯರಾತ್ರಿ ಕಾರ್ಯಾಚರಣೆ - CROCODILE

Buy Now on CodeCanyon