<p>ಅಧಿಕಾರ ಹಂಚಿಕೆ ದಂಗಲ್ಗೆ ಶ್ರೀಗಳ ಎಂಟ್ರಿಯಾಗಿದೆ. ಅದರ ಮುಂದವರೆದ ಭಾಗವೆಂಬಂತೆ ಇಂದು ಡಿಕೆಶಿ ಮನೆಗೆ ನಂಜಾವಧೂತ ಸ್ವಾಮೀಜಿ ಭೇಟಿ ಕೊಟ್ಟಿದ್ರು. ಇತ್ತ ಒಕ್ಕಲಿಗ ಶ್ರೀಗಳ ಮಾತಿಗೆ ಕುರುಬ ಸ್ವಾಮೀಜಿಗಳು ಕಿಡಿಕಾರಿದ್ದಾರೆ. ದಲಿತರಿಗೆ ಸಿಎಂ ಸ್ಥಾನ ಕೊಡುವಂತೆ ಮಾದಾರ ಆಗ್ರಹಿಸಿದ್ರು. ಇದೆಲ್ಲದರ ಮಧ್ಯೆ ಸಿದ್ದರಾಮಯ್ಯ ಮತ್ತು ಡಿಕೆಶಿ ಪರ ಪೂಜೆ, ಹೋಮ ಹವನ ಜೋರಾಗಿತ್ತು.. </p>
