Surprise Me!

ಚಿಕ್ಕಬಳ್ಳಾಪುರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ; ಹಲವು ಮನೆಗಳಿಗೆ ಹಾನಿ

2025-12-08 2 Dailymotion

ಚಿಕ್ಕಬಳ್ಳಾಪುರ: ವಿದ್ಯುತ್​ ಶಾರ್ಟ್ ಸರ್ಕ್ಯೂಟ್​ನಿಂದಾಗಿ ಬೆಂಕಿ ಹೊತ್ತಿಕೊಂಡು 5ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾದ ಘಟನೆ ಜಿಲ್ಲೆಯ ಚಿಂತಾಮಣಿ ನಗರದ ವಾರ್ಡ್​​ ನಂಬರ್​ 23ರ ದೊಡ್ಡಪೇಟೆಯ ಗಾಣಿಗ ಬೀದಿಯಲ್ಲಿ ಭಾನುವಾರ ಮಧ್ಯಾಹ್ನ ನಡೆಯಿತು.

"ಶಾರ್ಟ್​​​ ಸರ್ಕ್ಯೂಟ್​ನಿಂದಾಗಿ ಸುಮಾರು 5ಕ್ಕೂ ಅಧಿಕ ಮನೆಗಳಿಗೆ ಬೆಂಕಿ ಆವರಿಸಿದೆ" ಎಂದು ಸ್ಥಳೀಯರು ತಿಳಿಸಿದ್ದಾರೆ.

ಸುದ್ದಿ ತಿಳಿದು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಈ ಕುರಿತು ಮಾತನಾಡಿದ ಹಾನಿಗೀಡಾದ ಮನೆಯೊಂದರ ಮಾಲೀಕ ಹಾಗು ಕರಾಟೆ ಮಾಸ್ಟರ್ ಲೋಕೇಶ್, "ನಮ್ಮ ಮನೆ ಮಾತ್ರವಲ್ಲದೇ ನಮ್ಮ ಬೀದಿಯಲ್ಲಿ ಸುಮಾರು ಮನೆಗಳಲ್ಲಿ ಶಾರ್ಟ್​ ಸರ್ಕ್ಯೂಟ್​​ ಉಂಟಾಗಿ ಬೆಂಕಿ ಅವಘಡ ಸಂಭವಿಸಿದೆ. ಮನೆಯಲ್ಲಿದ್ದ ಎಲ್ಲ ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಕರಕಲಾಗಿವೆ. ನಮ್ಮ ಬಾಡಿಗೆದಾರ ಕೃಷ್ಣ ಸಿಂಗ್ ಅವರ ಮನೆಯಲ್ಲಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ನಷ್ಟ ಪರಿಹಾರ ನೀಡಲಿ" ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಪೊಲೀಸರಿಗೇ ಲಾಂಗ್​ ತೋರಿಸಿ ಪರಾರಿಯಾದ ಮನೆಗಳ್ಳರು: ವಿಡಿಯೋ ನೋಡಿ

Buy Now on CodeCanyon