ಭಾವನಗರ(ಗುಜರಾತ್): ಜೈನರ ಧರ್ಮ ಕೇಂದ್ರವಾಗಿರುವ ಪಾಲಿಟಾನದ ಶೆಟ್ರುಂಜಿ ಪರ್ವತ ಪ್ರದೇಶದಲ್ಲಿ ಸಿಂಹವೊಂದು ಕಾಣಿಸಿಕೊಂಡು ಯಾತ್ರಿಕರಲ್ಲಿ ಭಯ ಹುಟ್ಟಿಸಿದೆ. ಜನರು ಪರ್ವತ ಏರುತ್ತಿದ್ದಾಗ, ಕಾಡಿನ ರಾಜ ಮೆಟ್ಟಿಲುಗಳ ಬಳಿ ಬಂದಿದೆ. ಇದನ್ನು ಕಂಡ ಜನರು ಓಡಿದ್ದಾರೆ. ಇನ್ನು ಕೆಲವರು ತಮ್ಮ ಮೊಬೈಲ್ಗಳಲ್ಲಿ ವಿಡಿಯೋ ಮಾಡಿದ್ದಾರೆ.

ಶೆಟ್ರುಂಜಿ ಪರ್ವತ ಪ್ರದೇಶವು ಸಿಂಹಗಳ ಆವಾಸಸ್ಥಾನವಾಗಿದೆ. ಇಲ್ಲಿ ಹಲವಾರು ಬಾರಿ ಸಿಂಹಗಳಿವೆ. ಇಲ್ಲಿಗೆ ಬರುವ ಭಕ್ತರು ಸಿಂಹಗಳನ್ನು ಕಂಡಿದ್ದಾರೆ. ಈ ಕುರಿತ ವಿಡಿಯೋಗಳು ವೈರಲ್ ಆಗುತ್ತಿವೆ. ಕಾಡು ಪ್ರಾಣಿಗಳು ಹೆಚ್ಚಾಗಿ ತಿರುಗುವ ಈ ಪ್ರದೇಶದಲ್ಲಿ ಜನ ಸಂಚಾರದ ವೇಳೆ ಎಚ್ಚರಿಕೆ ವಹಿಸಬೇಕು ಎಂದು ಅರಣ್ಯ ಇಲಾಖೆ ಜಾಗೃತಿ ಮೂಡಿಸುತ್ತಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದ ಬಗ್ಗೆ ಅರಣ್ಯ ಅಧಿಕಾರಿ ದಿಗ್ವಿಜಯ್ ಸಿಂಗ್ ಅವರು ನೀಡಿದ ಮಾಹಿತಿಯಂತೆ, ಈ ವಿಡಿಯೋ ಡಿಸೆಂಬರ್ 22 ರಂದು ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಸೆರೆ ಹಿಡಿಯಲಾಗಿದೆ. ಸಿಂಹವು ಪರ್ವತ ಹತ್ತುವ ಮೆಟ್ಟಿಲುಗಳ ಬಂದಿದೆ. ಈ ಗಿರಿಯಲ್ಲಿ ಎರಡು ಗಂಡು, ಎರಡು ಹೆಣ್ಣು ಮತ್ತು ನಾಲ್ಕು ಮರಿಗಳು ಸೇರಿದಂತೆ 8 ಸಿಂಹಗಳಿವೆ. ಪಾಲಿಟಾನಾ ಸುತ್ತಿನ 1,574.92 ಹೆಕ್ಟೇರ್ ಭೂಮಿಯನ್ನು ಮೀಸಲು ಅರಣ್ಯವೆಂದು ಘೋಷಿಸಲಾಗಿದೆ. ಒಟ್ಟು 4,500 ಹೆಕ್ಟೇರ್ ಪ್ರದೇಶದ ಈ ಕಾಡಿನಲ್ಲಿ ಸಿಂಹಗಳು, ಚಿರತೆಗಳು, ಜಾಗ್ವಾರ್ಗಳು ಮತ್ತು ಇತರ ಪರಭಕ್ಷಕ ಪ್ರಾಣಿಗಳು ವಾಸಿಸುತ್ತವೆ ಎಂದು ತಿಳಿಸಿದ್ದಾರೆ.

ಜೈನ ಧರ್ಮದ ಕೇಂದ್ರವಾಗಿರುವ ಶೆಟ್ರುಂಜಿ ಬೆಟ್ಟದಲ್ಲಿ 104 ಧಾರ್ಮಿಕ ಸ್ಥಳಗಳಿವೆ. ಹುಲಿ ಕಾಣಿಸಿಕೊಂಡ ಜಾಗ ಭಕ್ತರು, ಯಾತ್ರಿಕರು, ಡೋಲಿವಾಲಾಗಳು, ಪುರೋಹಿತರು, ಹೂವು ಮಾರಾಟಗಾರರು ಮತ್ತು ಕಾವಲುಗಾರರಿಗೆ ದೈನಂದಿನ ಮಾರ್ಗವಾಗಿದೆ. ಕಾಡು ಪ್ರಾಣಿಗಳು ಮತ್ತು ಮನುಷ್ಯರ ನಡುವೆ ಸಂಘರ್ಷ ಉಂಟಾಗದಂತೆ ಜಾಗೃತಿ ಮೂಡಿಸಲು ಅರಣ್ಯ ಇಲಾಖೆ ಮಾರ್ಗಸೂಚಿಗಳನ್ನು ರೂಪಿಸಿದೆ.

ಇವುಗಳನ್ನೂ ಓದಿ:

ಮೈಸೂರು ಮೃಗಾಲಯದ ಆಕರ್ಷಣೀಯ ಹೆಣ್ಣು ಸಿಂಹ ರಕ್ಷಿತಾ ಅನಾರೋಗ್ಯದಿಂದ ಸಾವು

'ದೊಡ್ಡ ಬೆಕ್ಕಿನ ಜಾತಿ ಪ್ರಾಣಿ'ಗಳ ಸಂರಕ್ಷಣೆಗೆ ಮುಂದಾದ ಕೇಂದ್ರ ಸರ್ಕಾರ; ಪರಿಸರ ವ್ಯವಸ್ಥೆಯಲ್ಲೂ ಬದಲಾವಣೆ