Surprise Me!

ಮನೆ ಮುಂದಿದ್ದ ಬೀದಿನಾಯಿಯನ್ನು ಶರವೇಗದಲ್ಲಿ ನುಗ್ಗಿ ಎಳೆದೊಯ್ದ ಚಿರತೆ: ವಿಡಿಯೋ

2025-12-23 15 Dailymotion

ಮೈಸೂರು: ಜಿಲ್ಲೆಯ ಬೆಳವಾಡಿ ಗ್ರಾಮಕ್ಕೆ ರಾತ್ರಿ ವೇಳೆ ನುಗ್ಗಿದ ಚಿರತೆಯೊಂದು ಬೀದಿ ನಾಯಿಯನ್ನು ಬೇಟೆಯಾಡಿದೆ.

ಗ್ರಾಮದ ಕೆರೆ ಪಾಪಣ್ಣ ಎಂಬವರ ಮನೆ ಮುಂದಿದ್ದ ಬೀದಿನಾಯಿಗಳ ಪೈಕಿ ಒಂದನ್ನು ಅಟ್ಟಿಸಿಕೊಂಡು ಬಂದ ಚಿರತೆ, ಹಿಡಿದುಕೊಂಡು ಹೋಗಿದೆ. ಈ ವೇಳೆ ಬೇರೆ ನಾಯಿಗಳು ಬೊಗಳುತ್ತಾ ಚಿರತೆಯನ್ನು ಓಡಿಸಲು ಧಾವಿಸಿವೆ. ಆದರೆ, ಬೆದರದ ಚಿರತೆ ನಾಯಿಯನ್ನು ಹಿಡಿದೆಳೆದುಕೊಂಡು ಹೋಗಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಬೆಳವಾಡಿ ಗ್ರಾಮಸ್ಥರು ಮಾತ್ರವಲ್ಲದೇ, ಸುತ್ತಮುತ್ತಲಿನ ಗ್ರಾಮಗಳ ಜನರು ರಾತ್ರಿ ಹೊರಬರಲು ಭಯಪಡುತ್ತಿದ್ದಾರೆ. ಚಿರತೆಯಿಂದ ಪ್ರಾಣಹಾನಿ ಸಂಭವಿಸುವ ಮೊದಲೇ ಸೆರೆ ಹಿಡಿಯವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

ಚಿರತೆ ನಾಯಿಯನ್ನು ಬೇಟೆಯಾಡಿದ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಆದಷ್ಟು ಬೇಗ ಸೆರೆ ಹಿಡಿಯುವ ಭರವಸೆ ನೀಡಿದ್ದಾರೆ.

ಈ ಕುರಿತು ಈಟಿವಿ ಭಾರತ್‌ನೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಡಿಸಿಎಫ್ ಪರಮೇಶ್, "ಬೆಳವಾಡಿ ಗ್ರಾಮಕ್ಕೆ ನುಗ್ಗಿದ ಚಿರತೆಯೊಂದು ನಾಯಿಯನ್ನು ಬೇಟೆಯಾಡಿದ ಮಾಹಿತಿ ಬಂದಿದೆ. ನಮ್ಮ ಸಿಬ್ಬಂದಿ ಮುಂದಿನ ಕ್ರಮ ಕೈಗೊಂಡಿದ್ದಾರೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜಿಗಣಿಯ ಮದ್ಯದ ಬಾಟಲಿ‌ ಲೇಬಲ್‌ ಕಾರ್ಖಾನೆಯಲ್ಲಿ ಅಗ್ನಿ ಅವಘಡ: ವಿಡಿಯೋ - FIRE

Buy Now on CodeCanyon