<p>ಕಿಚ್ಚ ಸುದೀಪ್ ಪೈರಸಿ ವಿರುದ್ಧ ಯುದ್ಧಕ್ಕೆ ಸಿದ್ದ ಅಂತ ಹೇಳಿದ್ದು ಸದ್ದು ಮಾಡಿತ್ತು. ಆದ್ರೆ ಪೈರಸಿ ಮಾಡುವ ದುಷ್ಕರ್ಮಿಗಳು ಯಾವುದೇ ಅಂಜಿಕೆ ಇಲ್ಲದೇ ಇದೇ ವಾರ ರಿಲೀಸ್ ಆದ ಚಿತ್ರಗಳನ್ನ ಪೈರಸಿ ಮಾಡಿ ಹಂಚ್ತಾ ಇದ್ದಾರೆ. ದೊಡ್ಡ ಬಜೆಟ್ ಚಿತ್ರಗಳಾಗಿರೋ 45, ಮಾರ್ಕ್ ಸಿನಿಮಾಗಳೀಗೀಗ ಪೈರಸಿ ಭೂತದಿಂದ ನಷ್ಟದ ಭೀತಿ ಶುರುವಾಗಿದೆ.</p>
