<p>ಬಿಗ್ ಬಾಸ್ ಕನ್ನಡ ಸೀಸನ್-12ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿರೋ ಸ್ಪರ್ಧಿ ಗಿಲ್ಲಿ ನಟ. ಅದೆಷ್ಟೇ ಜನಪ್ರೀಯತೆ ಪಡೆದರೂ ಗಿಲ್ಲಿಗೆ ದೊಡ್ಮನೆಯ ಕ್ಯಾಪ್ಟನ್ ಆಗೋ ಚಾನ್ಸ್ ಮಾತ್ರ ಸಿಕ್ಕಿರಲಿಲ್ಲ. ಆದ್ರೆ ಕ್ಲೈಮ್ಯಾಕ್ಸ್ ಹತ್ತಿರಕ್ಕೆ ಬಂದಿರುವ ಹೊತ್ತಲ್ಲಿ ಗಿಲ್ಲಿ ಕ್ಯಾಪ್ಟನ್ ಆಗಿದ್ದಾನೆ. ಕೊನೆ ಹಂತದಲ್ಲಿ ಕ್ಯಾಪ್ಟನ್ ಆಗೋ ಮೂಲಕ ಕಪ್ ಮತ್ತಷ್ಟು ಸನಿಹ ಬಂದಿದ್ದಾನೆ ಗಿಲ್ಲಿ.</p>
