Surprise Me!

ಹಾವೇರಿ: ದಾಳಿ ಮಾಡುತ್ತಿದ್ದ ಮಂಗನ ಸೆರೆ ಹಿಡಿದ ಅರಣ್ಯ ಇಲಾಖೆ

2026-01-07 23 Dailymotion

ಹಾವೇರಿ: ಜನರ ಮೇಲೆ ದಾಳಿ ಮಾಡುತ್ತಿದ್ದ ಮಂಗನ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಅಂತರವಳ್ಳಿ ಗ್ರಾಮದಲ್ಲಿ ಕಾರ್ಯಾಚರಣೆ ಮಾಡಿದ ಅರಣ್ಯ ಇಲಾಖೆಯ ಸಿಬ್ಬಂದಿ ಮಂಗನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಗ್ರಾಮದ 10ಕ್ಕೂ ಅಧಿಕ ಜನರ ಮೇಲೆ ಸಿಕ್ಕಸಿಕ್ಕವರ ಮೇಲೆ ಮಂಗ ದಾಳಿ ಮಾಡಿತ್ತು. ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಇನ್ನೂ ಕೆಲವರು ಚಿಕಿತ್ಸೆ ಪಡೆದು‌ ಮನೆಯಲ್ಲಿ ಆರೈಕೆ ಹೊಂದುತ್ತಿದ್ದಾರೆ. ರಾಣೆಬೆನ್ನೂರು ತಾಲೂಕಿನ ಆಸ್ಪತ್ರೆಯಲ್ಲಿ ಗಾಯಾಳು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸತತ ಮೂರುಗಂಟೆಗಳ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಮಂಗನನ್ನು ಸೆರೆ ಹಿಡಿದಿದ್ದಾರೆ.

ಅರವಳಿಕೆ ಮದ್ದು ನೀಡಿ ಮಂಗನ ಪ್ರಜ್ಞೆ ತಪ್ಪಿಸಿ ಅರಣ್ಯ ಇಲಾಖೆ ಸೆರೆಹಿಡಿದಿದೆ. ಕಾರ್ಯಾಚರಣೆ ವೇಳೆ ಆತಂಕಗೊಂಡಿದ್ದ ಗ್ರಾಮದ ಜನರು ಬಡಿಗೆ ಹಿಡಿದು ನಿಂತಿದ್ದರು. ಮಂಗನ ದಾಳಿಯಿಂದ ಬೇಸತ್ತು ಹೋಗಿದ್ದ ಜನರು ಮಂಗನ ನೋಡಲು‌ ಮುಗಿ ಬಿದ್ದಿದ್ದರು. ಅರಣ್ಯ ಇಲಾಖೆಯ ಅಧಿಕಾರಿಗಳ ಕಾರ್ಯಾಚರಣೆಯಿಂದ ಗ್ರಾಮಸ್ಥರು ಆತಂಕ ದೂರವಾದಂತಾಗಿದೆ. ಮಂಗನ ಸೆರೆಯಾದ‌ ನಂತರ ಗ್ರಾಮಸ್ಥರು ನೆಮ್ಮದಿಯ‌ ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ: ಎರಡೂ ಕಣ್ಣು ಕಳೆದುಕೊಂಡ ಕಾಡುಕೋಣಕ್ಕೆ ಅರವಳಿಕೆ ಮದ್ದು ನೀಡಿ ಚಿಕಿತ್ಸೆ ನೀಡಿದ ಅರಣ್ಯ ಇಲಾಖೆ ಸಿಬ್ಬಂದಿ

Buy Now on CodeCanyon