Surprise Me!

ಸಿದ್ದನಕೊಳ್ಳ ಮಠಕ್ಕೆ ತೆಲಂಗಾಣ ಸಂಸದೆ ಡಿ.ಕೆ. ಅರುಣಾ ಭೇಟಿ: ವಿಡಿಯೋ

2026-01-12 11 Dailymotion

ಬಾಗಲಕೋಟೆ: ತೆಲಂಗಾಣ ರಾಜ್ಯದ ಲೋಕಸಭಾ ಸದಸ್ಯರಾದ ಡಿ.ಕೆ. ಅರುಣಾ ಅವರು ಜಿಲ್ಲೆಯ ಧಾರ್ಮಿಕ ಕ್ಷೇತ್ರ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ಸಿದ್ದನಕೊಳ್ಳ ಮಠಕ್ಕೆ ಭೇಟಿ ನೀಡಿ, ಡಾ.ಶಿವಕುಮಾರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.

ಬಳಿಕ ಮಾತನಾಡಿದ ಅವರು ಡಿ.ಕೆ. ಅರುಣಾ, ಬಾಗಲಕೋಟೆ ಜಿಲ್ಲೆಯ ಇಳಕಲ್​ ತಾಲೂಕಿನಲ್ಲಿರುವ ಸಿದ್ದನಕೊಳ್ಳ ಮಠಕ್ಕೆ ಆಶೀರ್ವಾದ ಪಡೆಯಲು ಬಂದಿದ್ದೇವೆ. ನಾವು ಇದಕ್ಕೂ ಮೊದಲು ಇಲ್ಲಿಗೆ ಬಂದು ಶಿವಕುಮಾರ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದಿದ್ದೆವು. ಲೋಕಸಭಾ ಚುನಾವಣೆಗೂ ಮೊದಲು ನಾವು ಇಲ್ಲಿಗೆ ಬಂದು ಇಷ್ಟಾರ್ಥ ಸಿದ್ದಿಗೆ ಬೇಡಿಕೊಂಡಿದ್ದೆವು. ಇಷ್ಟಾರ್ಥ ಈಡೇರಿದ ಹಿನ್ನೆಲೆ ಶಿವಕುಮಾರ ಸ್ವಾಮೀಜಿಯವರಿಂದ ಆಶೀರ್ವಾದ ಪಡೆಯಲು ನಾವು ಬಂದಿದ್ದೇವೆ ಎಂದು ತಿಳಿಸಿದರು.

ಮಠದಲ್ಲಿ ಶಾಂತ ವಾತಾವರಣ ಇದೆ. ಇಲ್ಲಿಗೆ ಬರುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಆದ್ದರಿಂದ ನಾವು ಮತ್ತೊಮ್ಮೆ ಸಿದ್ಧಪ್ಪ ತಾತಾ ಮತ್ತು ಶಿವಕುಮಾರ ಸ್ವಾಮೀಜಿಯವರಿಂದ ಆಶೀರ್ವಾದ ಪಡೆಯಲು ನಾವು ಇಲ್ಲಿಗೆ ಬಂದಿದ್ದೇವೆ. ನಾವು ಇಲ್ಲಿ ಇತರ ಸ್ಥಳಗಳು, ದೇವಾಲಯಗಳಿಗೆ ಭೇಟಿ ನೀಡಿದ್ದೇವೆ. ಶಿವಕುಮಾರ ಸ್ವಾಮೀಜಿ ಅನೇಕ ಜನರಿಗೆ ಸೇವೆ ಸಲ್ಲಿಸುತ್ತಾರೆ, ಒಂದು ಪೈಸೆಯನ್ನೂ ತೆಗೆದುಕೊಳ್ಳುವುದಿಲ್ಲ. ಯಾರಿಂದಲೂ ಏನನ್ನೂ ಆಶಿಸದೇ ಅವರು ಇಲ್ಲಿ ಎಲ್ಲರಿಗೂ ಸೇವೆ ಸಲ್ಲಿಸುತ್ತಲೇ ಇರುತ್ತಾರೆ ಮತ್ತು ಮಠದಲ್ಲಿರುವ ಪ್ರತಿಯೊಬ್ಬರನ್ನು ಆಶೀರ್ವದಿಸುತ್ತಾರೆ. ಆದ್ದರಿಂದ, ಇಲ್ಲಿಗೆ ಬಂದಿರುವುದಕ್ಕೆ ತುಂಬಾ ಸಂತೋಷವಾಯಿತು ಎಂದು ಹೇಳಿದರು.

ಕಳೆದ ಬಾರಿ ಶಿವಕುಮಾರ ಸ್ವಾಮೀಜಿ ಏನು ಭವಿಷ್ಯ ನುಡಿದಿದ್ದರೋ, ಆ ಭವಿಷ್ಯ ನಿಜವಾಯಿತು. ಅದಕ್ಕಾಗಿಯೇ ನಾವು ಸ್ವಾಮೀಜಿಯವರ ಆಶೀರ್ವಾದ ಪಡೆಯಲು ಮತ್ತೆ ಇಲ್ಲಿಗೆ ಬಂದಿದ್ದೇವೆ. ಸ್ವಾಮೀಜಿ ನನ್ನ ಮಗಳಿಗೂ ಆಶೀರ್ವದಿಸಿದರು ಎಂದರು.

ಇದನ್ನೂ ಓದಿ: ಮಂತ್ರಾಲಯಕ್ಕೆ ಹರಿದು ಬಂದ ಭಕ್ತಸಾಗರ: 20 ದಿನಗಳಲ್ಲೇ 3.73 ಕೋಟಿ ಕಾಣಿಕೆ ಸಂಗ್ರಹ

Buy Now on CodeCanyon