<p>ಉಳಗನಾಯಗನ್ ಕಮಲ್ ಹಾಸನ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡ್ತಾ ಇದ್ದಾರೆ. ಇದೀಗ ಕಮಲ್ ಒಬ್ಬ ಸ್ಟಾರ್ ಡೈರೆಕ್ಟರ್ ಜೊತೆ ಸಿನಿಮಾ ಮಾಡೋಕೆ ಸಜ್ಜಾಗಿದ್ದು ಫ್ಯಾನ್ಸ್ ಆ ಕಾಂಬೋ ಹೆಸರು ಕೇಳಿನೇ ಥ್ರಿಲ್ ಆಗಿದ್ದಾರೆ. ಆಡುಕುಲಂ’, ‘ವಿಸಾರಣೈ ‘ವಡ ಚೆನ್ನೈ’, ‘ಅಸುರನ್’ ಸೇರಿದಂತೆ ಹಲವು ಅತ್ಯುತ್ತಮ ಸಿನಿಮಾಗಳನ್ನ ನೀಡಿರುವ ವೆಟ್ರಿಮಾರನ್ ಇದೀಗ ಕಮಲ್ ಹಾಸನ್ ನಟನೆಯ ಸಿನಿಮಾ ನಿರ್ದೇಶಿಸಲಿದ್ದಾರೆ. ಇಬ್ಬರು ಅದ್ಭುತ ಪ್ರತಿಭಾವಂತರು ಒಟ್ಟಿಗೆ ಸೇರಿದ್ದು, ಅಧ್ಬುತ ಸಿನಿಮಾದ ನಿರೀಕ್ಷೆಯಲ್ಲಿದ್ದಾರೆ ಫ್ಯಾನ್ಸ್.<br> </p>
