Surprise Me!

ಉಡುಪಿ: ಪ್ರಕೃತಿಯ ಮಡಿಲಿನ ಮಾಲ್ತಿ ದ್ವೀಪದಲ್ಲಿ ಮಕರ ಸಂಕ್ರಾಂತಿ ವಿಶೇಷ ಪೂಜೆ

2026-01-14 2 Dailymotion

ಉಡುಪಿ: ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ, ಪ್ರತಿ ವರ್ಷದಂತೆ ಇಲ್ಲಿನ ಕೊಡವೂರು ಶಂಕರನಾರಾಯಣ ದೇವಸ್ಥಾನದ ವತಿಯಿಂದ ಮಲ್ಪೆ ಮಾಲ್ತಿ ದ್ವೀಪದಲ್ಲಿನ ಶ್ರೀ ಆದಿಪರಾಶಕ್ತಿ ಸನ್ನಿದಾನದಲ್ಲಿ ಇಂದು ವಿಶೇಷ ಪೂಜೆ ನಡೆಯಿತು. ಈ ದ್ವೀಪವು ಮಲ್ಪೆ ಸಮುದ್ರ ತೀರದಿಂದ ಸುಮಾರು 6 ಕಿಲೋ ಮೀಟರ್ ದೂರದಲ್ಲಿದೆ.

ಆದಿ ದೇವಸ್ಥಾನ ಎಂದು ನಂಬಲಾಗುವ ಇಲ್ಲಿನ ಸನ್ನಿಧಿಯಲ್ಲಿ ವರ್ಷಕ್ಕೊಮ್ಮೆ ಮಕರ ಸಂಕ್ರಾಂತಿಯಂದು ಮಾತ್ರ ಸಾರ್ವಜನಿಕವಾಗಿ ವಿಶೇಷ ಪೂಜೆ ನಡೆಯುತ್ತದೆ. ಅರ್ಚಕರು ಮತ್ತು ನೂರಾರು ಭಕ್ತರು ಸಾಂಪ್ರದಾಯಿಕ ದೋಣಿ ಹಾಗೂ ಬೋಟ್‌ನಲ್ಲಿ ದ್ವೀಪಕ್ಕೆ ತೆರಳಿದ್ದರು. ದೇವಿಯ ವಿಗ್ರಹಕ್ಕೆ ವಿಶೇಷ ಅಲಂಕಾರಗಳೊಂದಿಗೆ ಅಭಿಷೇಕ ಮತ್ತು ಪೂಜೆ ನೆರವೇರಿಸಲಾಯಿತು. ಅಲ್ಲದೆ, ಹಲವು ಭಕ್ತರು ಮಲ್ಪೆ ಬಂದರಿನಿಂದ ಲಭ್ಯವಿರುವ ದೋಣಿ ಹಾಗೂ ಬೋಟ್​ಗಳ ಮೂಲಕ ಮಾಲ್ತಿ ದ್ವೀಪವನ್ನು ತಲುಪಿದ್ದರು.

ಈ ಬಗ್ಗೆ 'ಈಟಿವಿ ಭಾರತ' ಜೊತೆ ಮಾತನಾಡಿದ ಸ್ಥಳೀಯ ನಿವಾಸಿ ಜನಾರ್ದನ, ''ನಾವು ವರ್ಷಂಪ್ರತಿ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡುತ್ತೇವೆ. ಕೊಡವೂರು ನಿವಾಸಿಗಳಾದ ನಾವು ಸಮೀಪದ ಮಾಲ್ತಿ ದ್ವೀಪಕ್ಕೆ ದೋಣಿಯಲ್ಲಿ ತೆರಳುತ್ತೇವೆ. ಅಲ್ಲಿ ನಡೆಯುವ ದೇವಿಯ ಪೂಜೆಯಲ್ಲಿ ಭಾಗವಹಿಸುತ್ತೇವೆ. ದೇವಿ ವಿಗ್ರಹಕ್ಕೆ ವಿಶೇಷ ಅಲಂಕಾರಗಳೊಂದಿಗೆ ಪೂಜೆ ಮಾಡಲಾಗುತ್ತದೆ. ಇದು ಬಹಳ ವರ್ಷಗಳಿಂದಲೂ ನಡೆದುಕೊಂಡು ಬರುತ್ತಿರುವ ಪದ್ಧತಿ. ಇದೊಂದು ಪ್ರಕೃತಿಯ ಆರಾಧನೆಯೂ ಹೌದು'' ಎಂದು ತಿಳಿಸಿದರು.

ಇದನ್ನೂ ಓದಿ: ಕಾಫಿನಾಡಿನಲ್ಲಿ ಸಂಕ್ರಾಂತಿ ಸಂಭ್ರಮ: ಹುತ್ತಗಳನ್ನು ಹುಡುಕಿಕೊಂಡು ಹೋಗಿ ಪೂಜೆ ಮಾಡುವ ಕುಳೆ ನಾಗರ ಹಬ್ಬದ ವಿಶೇಷತೆ ಹೀಗಿದೆ

Buy Now on CodeCanyon