Surprise Me!

ಮೈಸೂರು: ರಾಸುಗಳನ್ನು ಕಿಚ್ಚು ಹಾಯಿಸಿ ಸಂಕ್ರಾಂತಿ ಸಂಭ್ರಮ - ವಿದೇಶಿಗರೂ ಭಾಗಿ

2026-01-16 8 Dailymotion

ಮೈಸೂರು: ಮಕರ ಸಂಕ್ರಾಂತಿ ಹಬ್ಬದ ಆಚರಣೆ ರಾಜ್ಯಾದ್ಯಂತ ಕಳೆಗಟ್ಟಿತ್ತು. ವರ್ಷದ ಮೊದಲ ಹಬ್ಬವನ್ನು ನಾಡಿದ ಜನರು ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಆಚರಿಸಿದರು. ಸಂಕ್ರಾಂತಿ ಪ್ರಯುಕ್ತ ಗ್ರಾಮೀಣ ಸೊಗಡು ಎಲ್ಲೆಡೆ ಕಂಡುಬಂತು. ನಗರದ ಸಿದ್ದಲಿಂಗಪುರ ರಸ್ತೆಯಲ್ಲಿ ಗ್ರಾಮದ ರಾಸುಗಳಿಗೆ ಬಣ್ಣ ಹಾಗೂ ಬಗೆಯ ಹೂಗಳಿಂದ ಅಲಂಕರಿಸಿ ರೈತರು ಕಿಚ್ಚು ಹಾಯಿಸಿ ಸುಗ್ಗಿ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಿದರು.

ಹಬ್ಬದ ಪ್ರಯುಕ್ತ ಬೆಳಗ್ಗೆಯಿಂದಲೇ ದನಗಳಿಗೆ ಪೂಜೆ ನೆರವೇರಿತು. ಅದಕ್ಕೂ ಮುನ್ನ ಕೆರೆ, ಕಾಲುವೆಗಳಲ್ಲಿ ರಾಸುಗಳನ್ನು ಸ್ವಚ್ಛಗೊಳಿದ ರೈತರು, ಬಳಿಕ ಅವುಗಳಿಗೆ ಸಾಂಪ್ರದಾಯಿಕ ಬಣ್ಣ ಬಳಿದು, ಶೃಂಗಾರ ಮಾಡಿ, ಸಂಜೆ ಊರಿನ ಮುಂದೆ ಕಿಚ್ಚು ಹಾಯಿಸಿ ಸಂಭ್ರಮಪಟ್ಟರು. ಎತ್ತು ಸಾಕಿರುವವರ ಮನೆಯಲ್ಲಂತೂ ಅವುಗಳನ್ನು ಸಂಕ್ರಾಂತಿ ಹಬ್ಬಕ್ಕೆ ಸಜ್ಜುಗೊಳಿಸುವುದೇ ಒಂದು ದೊಡ್ಡ ಸಂಭ್ರಮವಾಗಿತ್ತು. ವರ್ಷದ ಮೊದಲ ಹಬ್ಬ ಹಾಗೂ ರೈತರ ಸುಗ್ಗಿ ಹಬ್ಬವಾದ ಸಂಕ್ರಾಂತಿಯನ್ನು ಗ್ರಾಮಾಂತರ ಪ್ರದೇಶದಲ್ಲಿ ಸ್ವಲ್ಪ ವಿಭಿನ್ನವಾಗಿ ವಿಶೇಷವಾಗಿ ಆಚರಿಸಲಾಯಿತು.

ಅದೇ ರೀತಿ ಮನೆ ಮನೆಗಳಲ್ಲೂ ಹಬ್ಬದ ಸಂಭ್ರಮ ಜೋರಾಗಿತ್ತು. ಒಬ್ಬರಿಗೊಬ್ಬರು ಎಳ್ಳು ಬೆಲ್ಲಕೊಟ್ಟು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಒಟ್ಟಿನಲ್ಲಿ ಬಣ್ಣ ಬಣ್ಣದ ರಂಗೋಲಿಗಳು, ರಾಸುಗಳಿಗೆ ಕಿಚ್ಚಾಯಿಸುವುದು ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು. ಇನ್ನು ರಾಸುಗಳಿಗೆ ಕಿಚ್ಚು ಹಾಯಿಸುವ ಸಂಭ್ರಮವನ್ನು ಕಣ್ತುಂಬಿಕೊಳ್ಳಲೆಂದೇ ವಿದೇಶಿಗರು ಭಾಗಿಯಾಗಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲೂ ಕಳೆಗಟ್ಟಿದ ಪೊಂಗಲ್ ಆಚರಣೆ

Buy Now on CodeCanyon