Surprise Me!

ಬೀದರ್ ಕೋಟೆ ಮೇಲೆ ಸೂರ್ಯಕಿರಣ ಏರ್ ಶೋ ಕಲರವ...ವಿಡಿಯೋದಲ್ಲಿ ನೋಡಿ...

2026-01-17 7 Dailymotion

ಬೀದರ್​: ಬೀದರ್ ಕೋಟೆಯ ಮೇಲೆ ಭಾರತೀಯ ವಾಯುಪಡೆ ಬೀದರ್​ನ ಸೂರ್ಯಕಿರಣ ವಿಮಾನಗಳ ಏರೋಬ್ಯಾಟಿಕ್ ತಂಡದಿಂದ ಶುಕ್ರವಾರ ಅದ್ಬುತ್ ಏರ್ ಶೋ ಜರುಗಿತು.

ವಿಮಾನಗಳು ಭಾರತ ದೇಶದ ತ್ರಿವರ್ಣ ಧ್ವಜದ ಬಣ್ಣದ ಹೊಗೆಯೊಂದಿಗೆ ಆಗಸದಲ್ಲಿ ವಿವಿಧ ಸಾಹಸಮಯ ಕಸರತ್ತುಗಳನ್ನು ಪ್ರದರ್ಶಿಸಿ ನೋಡುಗರ ಕಣ್ಮನ ಸೆಳೆದವು. ಬೀದರ ಕೋಟೆಯ ಮೇಲೆ ಲೋಹದ ಹಕ್ಕಿಗಳ ಕಲರವ ಮತ್ತು ಕಸರತ್ತು ನೋಡಿ ವಿವಿಧ ಶಾಲಾ - ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಖುಷಿ ಪಟ್ಟರು.

ಸೂರ್ಯಕಿರಣ ವಿಮಾನಗಳು ಆಕಾಶದಲ್ಲಿ ಮೇಲಿನಿಂದ ಕೆಳಗೆ, ಪರಸ್ಪರ ಒಂದಾನೊಂದು ಎದುರಿಗೆ ಕ್ರಾಸಿಂಗ್, ಬ್ಯಾರಲ್ ರೋಲ್, ರಾಷ್ಟ್ರ ಧ್ವಜದ ಕೇಸರಿ, ಬಿಳಿ, ಹಸಿರು ಬಣ್ಣದ ಹೊಗೆ ಹೊರಹಾಕುತ್ತ ಚಿತ್ರಗಳನ್ನು ಬಿಡಿಸುವ ಮೂಲಕ ನೋಡುಗರನ್ನು ಮೂಕವಿಸ್ಮಿತರನ್ನಾಗಿಸಿತು. ಕೆಲವೊಂದು ಸಲ ಒಂಟಿಯಾಗಿ, ಜೋಡಿಯಾಗಿ ಮತ್ತು ತಂಡವಾಗಿ ವಿಮಾನಗಳು ಬರುತ್ತಿದ್ದವು. ಯಾವ ದಿಕ್ಕಿನಿಂದ ಆಕಾಶದಲ್ಲಿ ಬರುತ್ತಿವೆ ಎನ್ನುವುದನ್ನು ಜನರು ಕುತೂಹಲದಿಂದ ವೀಕ್ಷಿಸುತ್ತಿದ್ದರು.

ಏರ್ ಶೋ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್​ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಅವರ ಕುಟುಂಬದ ಸದಸ್ಯರು. ಏರ್​ ಪೋರ್ಸ್​ ಸ್ಟೇಷನ್​ ಬೀದರ್​ ಅಧಿಕಾರಿಗಳು ಹಾಗೂ ಅವರ ಕುಟುಂಬದ ಸದಸ್ಯರು, ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನರು ಉಪಸ್ಥಿತರಿದ್ದರು.

ಇದನ್ನೂ ಓದಿ: ಮೈಸೂರು: ರಾಸುಗಳನ್ನು ಕಿಚ್ಚು ಹಾಯಿಸಿ ಸಂಕ್ರಾಂತಿ ಸಂಭ್ರಮ - ವಿದೇಶಿಗರೂ ಭಾಗಿ

Buy Now on CodeCanyon