ಚಿಕ್ಕಮಗಳೂರು: ರಾಟ್ ವ್ಹೀಲರ್ ಜಾತಿಯ ಸಾಕು ನಾಯಿ ಹಾಗೂ ನಾಗರ ಹಾವಿನ ನಡುವೆ ಭೀಕರ ಕಾಳಗ ನಡೆದು, ಕೊನೆಗೆ ಎರಡೂ ಸಾವನ್ನಪ್ಪಿವೆ. ಈ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ನಡೆದಿದೆ.

ಇಟ್ಟಿಗೆ ಗ್ರಾಮದ ನಿವಾಸಿಯೊಬ್ಬರ ಮನೆಯ ಆವರಣದಲ್ಲಿ ನಾಗರ ಹಾವನ್ನು ಕಂಡ ನಾಯಿ ತನ್ನ ಸ್ವಾಭಾವಿಕ ಸ್ವಭಾವದಂತೆ ಹಾವನ್ನು ಕಂಡು ಬೊಗಳಿದೆ. ಇದಕ್ಕೆ ಪ್ರತಿಯಾಗಿ ಹಾವು ನಾಯಿಯ ಬಾಯಿಗೆ ಕಚ್ಚಿದೆ. ಇದರಿಂದ ಮತ್ತು ರೊಚ್ಚಿಗೆದ್ದ ನಾಯಿ ಹಾವಿಗೆ ಕಡಿದಿದೆ. ಸ್ಥಳೀಯರು ಎಷ್ಟೇ ಬೊಬ್ಬಿಟ್ಟು ನಾಯಿಯನ್ನು ಕರೆದರೂ ಬರದ ನಾಯಿ ಹಾವನ್ನು ಬಾಯಲ್ಲಿ ಕಚ್ಚಿ ನೆಲಕ್ಕೆ ಕುಕ್ಕಿ ಕೊಂದಿದೆ. ಬಳಿಕ ತನ್ನ ಗೂಡಿಗೆ ತೆರಳಿ ಮಲಗಿದೆ. ಆದರೆ ದೇಹದ ತುಂಬಾ ನಾಗರ ಹಾವಿನ ವಿಷ ಹರಡಿದ ಕಾರಣ ಚಿಕಿತ್ಸೆ ಕೊಡುವ ಮುನ್ನವೇ ನಾಯಿ ಮೃತಪಟ್ಟಿದೆ.

ಘಟನೆಯ ಬಳಿಕ ಮನೆಯವರು ನಾಗರಹಾವಿಗೆ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ನಾಯಿ ತನ್ನ ಮಾಲೀಕರನ್ನು ಹಾಗೂ ಮನೆ ಆವರಣವನ್ನು ರಕ್ಷಿಸುವ ಪ್ರಯತ್ನದಲ್ಲಿ ಪ್ರಾಣ ತ್ಯಾಗ ಮಾಡಿದೆ. ಇತ್ತ ಹಾವು ತನ್ನ ಪ್ರಾಣ ಉಳಿಸಿಕೊಳ್ಳಲು ಹೋರಾಟ ಮಾಡಿದೆ. ಈ ಘಟನೆಯಿಂದ ನಾಯಿಯನ್ನು ಕಳೆದುಕೊಂಡು ಕುಟುಂಬದ ಸದಸ್ಯರು ಕಣ್ಣೀರು ಸುರಿಸುತ್ತಿದ್ದಾರೆ.

ಇದನ್ನೂ ಓದಿ: ನಾಯಿಗೆ ಹೆದರಿ ವೇಗವಾಗಿ ಬೈಕ್ ಚಲಾಯಿಸಿದ ಸವಾರ ಮನೆ ಗೋಡೆಗೆ ಡಿಕ್ಕಿಯಾಗಿ ಸಾವು ; ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ