ದಾವಣಗೆರೆ : ನಾನು ಪೊಲೀಸರಿಗೆ ಯಾರನ್ನೂ ಅರೆಸ್ಟ್ ಮಾಡಿ ಎಂದು ಹೇಳಿಲ್ಲ. ಅಲ್ಲಿ ಹೋಗಿ ಕೆಟ್ಟ ಪದ ಬಳಕೆ ಮಾಡಿದ್ದಾರೆ. ಆದ್ದರಿಂದ, ವಿಡಿಯೋ ಆಧಾರವಾಗಿ ಇಟ್ಟುಕೊಂಡು ಕಂಪ್ಲೇಂಟ್ ಮಾಡಿದ್ದಾರೆ ಎಂದು ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ಸಚಿವರ ವಿರುದ್ದ ಜಿಲ್ಲಾ ಬಿಜೆಪಿ ಪ್ರತಿಭಟನೆ ಮಾಡಿದ ವಿಚಾರವಾಗಿ ಹಾಗೂ ಶಾಸಕ ಬಿ. ಪಿ. ಹರೀಶ್ ವಿರುದ್ದ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂಬ ಆರೋಪದ ಕುರಿತು ಅವರು ಪ್ರತಿಕ್ರಿಯಿಸಿದರು.

ಯಾರೇ ಆಗಲಿ, ಸಂಸ್ಕಾರ ಕಲಿಯಬೇಕು. ಯಾವ ರೀತಿ ನಡವಳಿಕೆ ಇರಬೇಕು. ನಡೆ ಇರಬೇಕು ಎಂಬುದನ್ನು ಕಲಿಯಬೇಕು. ಆ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ. ಬಿಪಿ ಹರೀಶ್ ಇವಾಗಲ್ಲ, ಚಿಕ್ಕ ವಯಸ್ಸಿನಿಂದಲೂ ನೋಡಿದ್ದೇನೆ. ಜೊತೆಗೆ ಕ್ರಿಕೆಟ್ ಆಟವಾಡಿದ್ದೇನೆ. ಯಾವಾಗಲೂ ಎಲ್ಲರ ಬಳಿ ಜಗಳ ಮಾಡ್ತಾ ಇದ್ದ. ನಮ್ಮ ತಂದೆಯ ಆರಾಧನೆ ಇದ್ದಾಗ ಕಂಟ್ರಾಕ್ಟರ್ಗಳಿಗೆ ಕೊಟ್ಟಿದ್ದೇ. ಅವರನ್ನು ಹೋಗಿ ಕೇಳಬೇಕು? ಎಲ್ಲಿಂದ ಮಣ್ಣು ಹೊಡೆಸಿದ್ದಾರೆ ಎಂದು. ನನ್ನ ಬಳಿ ಕೇಳಿದ್ರೆ ಹೇಗೆ?. ಅಲ್ಲಿ ಮಣ್ಣನ್ನು ರೈತರು ಕೂಡ ಹೊಡೆಸಿದ್ದಾರೆ. ಅಕ್ರಮವಾಗಿದ್ದರೆ ನನ್ನ ಮೇಲೆ ಕೂಡ ಪ್ರಕರಣ ದಾಖಲು ಮಾಡಲಿ ಎಂದಿದ್ದಾರೆ.

ಈ ಹಿಂದೆ ಚಿಕ್ಕಬಿದರಿ ಗ್ರಾಮದಲ್ಲಿ ಜಮೀನು ಕಬಳಿಕೆ ಮಾಡಿದ್ದೇವೆ ಎಂದು ಆರೋಪ ಮಾಡಿದ್ದ. ಅದು ವರದಿ ಕೂಡ ಬರ್ತಾ ಇದೆ, ಆವಾಗ ಮಾತಾಡ್ತಿನಿ. ಬೈ ಎಲೆಕ್ಷನ್ ಬಂತು ಅಂತ ಇಷ್ಟು ದಿನ ಇಲ್ಲದೇ ಇರೋ ಮಾಜಿ ಎಂಪಿ ಹೊರಗೆ ಬಂದಿದಾನೆ. ಅವರನ್ನು ಊರಿಗೆ ಕಳಿಸಿದ್ವಿ, ಮತ್ತೆ ಬಂದಿದಾನೆ ಎಂದು ವ್ಯಂಗ್ಯವಾಡಿದರು.

ಬೈ ಎಲೆಕ್ಷನ್ ಬರ್ತಾ ಇದೆ ಎಂದು ಹಾಗೂ ಸಿಂಪಥಿ ಬರ್ಲಿ ಎಂದು ಮಾತಾಡ್ತಾ ಇದಾನೆ. ನಾನು ಮೂರನೇ ಬಾರಿ ಮಂತ್ರಿ ಆಗಿದ್ದೇನೆ. ಇಲ್ಲಿಯವರೆಗೂ ಯಾವುದೇ ಕಪ್ಪು ಚುಕ್ಕೆ ಇಲ್ಲ. ಈಗ ನನ್ನ ಮೇಲೆ ಆರೋಪ ಮಾಡಲು ಬರುತ್ತಿದ್ದಾರೆ. ಅಧಿಕಾರಿಗಳು ಕಾನೂನು ಹೇಗೆ ಇದಿಯೋ ಹಾಗೆ ನಡೆದುಕೊಂಡು ಹೋಗುತ್ತಾರೆ. ಅದನ್ನು ಬಿಟ್ಟು ಅವರ ಮೇಲೆ ಏಕವಚನದಲ್ಲಿ ಮಾತಾಡೋದು ಸರಿಯಲ್ಲ ಎಂದಿದ್ದಾರೆ.

ಇದನ್ನೂ ಓದಿ : ಜಾತಿ ನಿಂದನೆ ಆರೋಪ: ಹರಿಹರ ಶಾಸಕ ಬಿ.ಪಿ.ಹರೀಶ್ ವಿರುದ್ಧ ಎಫ್ಐಆರ್