<p>ಅವ್ರಿಬ್ಬರೂ ಒಂದೇ ಊರಿನವರು.. ಅಲ್ದೆ ಒಂದೇ ಕಾಲೋನಿಯವರು ಕೂಡ.. ಅದ್ರಲ್ಲಿ ಒಬ್ಬ ದೇವಸ್ಥಾನದಲ್ಲಿ ಪೂಜೆ ಪುನಸ್ಕಾರ ಮಾಡ್ಕೊಂಡಿದ್ದ ಅರ್ಚಕನಾಗಿದರೆ, ಇನ್ನೊಬ್ಬ ಓದು ಮುಗಿಸಿ ಹೊಲ-ಮನೆ ಅಂತ ಕೆಲಸ ಮಾಡ್ಕೊಂಡಿದ್ದ.. ಒಂದೇ ಊರಿನವಾಗಿದ್ರಿಂದ ಅರ್ಚಕ ಈ ಯುವಕನ ಅಕ್ಕನನ್ನ ಲವ್ ಮಾಡ್ಕೊಂಡಿದ್ದ.. ಎಷ್ಟೇ ವಾರ್ನಿಂಗ್ ಮಾಡಿದ್ರೂ ಕೂಡ ಪ್ರೀತಿ ಮಾಡೋದನ್ನ ಮಾತ್ರ ಬಿಡ್ಲೇಇಲ್ಲ.. ಆದ್ರೆ ಕೊನೆಗೆ ಅಕ್ಕನ ಪೀಡಿಸುತ್ತಿದ್ದ ಆ ಅರ್ಚಕನಿಗೆ ಆಪ್ರಾಪ್ತನೇ ಚಟ್ಟ ಕಟ್ಟಿದ್ದಾನೆ.. ಇದಕ್ಕೆ ಸಾಕ್ಷಿಯಾಗಿದ್ದು ಅರ್ಚರ ನಿತ್ಯ ಪೂಜೆ ಮಾಡುತ್ತಿದ್ದ ದೇವಸ್ಥಾನ..</p>
